Republic Day Speech in Kannada for Students and Teachers

Republic Day Speech in Kannada: ಎಲ್ಲಾ ಆತ್ಮೀಯ ಬಂಧುಗಳಿಗೆ ಬೆಳಗಿನ ಶುಭೋದಯ ಮತ್ತು ಗಣರಾಜ್ಯೋತ್ಸವದ ಶುಭಾಶಯಗಳು.
ಬ್ರಿಟೀಷ್ ಆಳ್ವಿಕೆಯಿಂದ ನಮ್ಮ ದೇಶ 1947 ರಲ್ಲಿ ಸ್ವತಂತ್ರವಾದ ಬಳಿಕ 1950 ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಅನ್ವಯಿಸಿಕೊಂಡು ಗಣರಾಜ್ಯೋತ್ಸವವೆನಿಸಿಕೊಂಡಿತು.
ಅಲ್ಲಿಂದೀಚೆಗೆ ಪ್ರತಿವರ್ಷ ಜನವರಿ 26 ರಂದು ಅತ್ಯಂತ ಸಡಗರ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

ಭಾರತ ನಮ್ಮ ದೇಶ. ಭಾವೈಕ್ಯತೆಯೇ ಇದರ ಜೀವವಾಗಿದೆ. ನಮ್ಮ ದೇಶಕ್ಕೆ ಸಮೃದ್ಧ ಸಂಸ್ಕೃತಿಯ ಇತಿಹಾಸ ಮತ್ತು ವೀರ ಧೀರರ ಪರಂಪರೆಯ ಹಿನ್ನೆಲೆಯಿದೆ.
ಸೌಹಾರ್ದತೆ, ಶಾಂತಿ, ಸಹಿಷ್ಣುತೆ, ಸಮಾನತೆ ಇವು ದೇಶವನ್ನು ಭದ್ರ ಪಡಿಸುವ ಮೌಲ್ಯಗಳಾಗಿವೆ. ನಾವು 07 ದಶಕಗಳಲ್ಲಿ ಬಹಳಷ್ಟು ಸಾಧಿಸಿದ್ದೇವೆ. ಸಾಧಿಸಬೇಕಾಗಿರುವುದು ಇನ್ನೂ ಸಾಕಷ್ಟಿದೆ.

ನಾವೆಲ್ಲರೂ ನಮ್ಮ – ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವ ಮೂಲಕ ವೈಯಕ್ತಿಕವಾಗಿ ಮತ್ತು ಸಾಂಘಿಕವಾಗಿ ಪ್ರಯತ್ನಪಟ್ಟರೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧ್ಯವಾಗುತ್ತದೆ.
ಶಿಕ್ಷಣದ ಮೂಲಕ ನಾವು ಈ ಸಾಧನೆಯ ಹಾದಿಯನ್ನು ತಲುಪಲು ಶ್ರಮಪಡಬೇಕಿದೆ ಎಂಬ ಆಶಯದೊಂದಿಗೆ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ಧನ್ಯವಾದಗಳು-ಜೈ ಹಿಂದ್ ಜೈ ಸಂವಿಧಾನ್

Republic Day Speech in Kannada 2021

ನನ್ನ ಎಲ್ಲಾ ಆತ್ಮೀಯ ಸ್ನೇಹಿತರಿಗೆ ಮತ್ತು ಗುರುವ್ರಂದವರಿಗೂ ಬೆಳಗಿನ ಶುಭೋದಯ.
ನನ್ನ ಹೆಸರು ಇಫ್ರಾ ಕುಲ್ಸುಂ. ನಾನು ಯು. ಕೆ. ಜಿ ಯ ವಿದ್ಯಾರ್ಥಿನಿ ಎಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು.
ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾದದ್ದು ಜನವರಿ 26 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಭಾರತದ ಪ್ರಜೆಗಳನ್ನು ಆಳುವ -ಶಾಸಕಾಂಗ, ನ್ಯಾಯ ಒದಗಿಸುವ – ನ್ಯಾಯಾಂಗ. ಹಾಗೂ ಜನರಿಗಾಗಿ ಕೆಲಸ ಮಾಡುವ ಕಾರ್ಯಾಂಗಗಳು ಹೇಗಿರಬೇಕು? ಯಾವೆಲ್ಲ ನೀತಿ ನಿಯಮಗಳನ್ನು ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲಾ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಛವೇ – ಸಂವಿಧಾನ. ಡಾ. ಬಿ ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ 1950 ಜನವರಿ 26 ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಭಾರತೀಯರಾದ ನಾವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ” ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನು ಕಾಪಾಡುವ ಭೂ ಸೇನೆ, ವಾಯು ಸೇನೆ, ಹಾಗೂ ನೌಕಾ ಸೇನೆಯ ಎಲ್ಲಾ ಸೈನಿಕರಿಗೂ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲಾ ವಿಜ್ಞಾನಿಗಳು, ತಂತ್ರಜ್ಞರಿಗೆ ಮತ್ತು ದೇಶದ ಬೆನ್ನೆಲುಬಾದ ರೈತ ವರ್ಗಕ್ಕೂ ನಾವು ಈ ಸಂದರ್ಭದಲ್ಲಿ ಚಿರಋಣಿಯಾಗಿರುತ್ತಾ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸೇವೆ ಸಲ್ಲಿಸೋಣ ಎಂದು ಶಪಥ ಮಾಡೋಣ. ಇಷ್ಟನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.

ನನ್ನ ದೇಶ – ನನ್ನ ಹೆಮ್ಮೆ
ಜೈ ಹಿಂದ್

Leave a Comment